ಬ್ಲೂಮ್ಫೀಲ್ಡ್, ಮೌರಿಸ್

ಬ್ಲೂಮ್‍ಫೀಲ್ಡ್, ಮೌರಿಸ್
	1855-1920. ಪ್ರಾಚ್ಯ ವಿದ್ವಾಂಸ, ವೇದಪಾರಂಗತ, ವ್ಯಾಕರಣಶಾಸ್ತ್ರಜ್ಞ, ಭಾಷಾಶಾಸ್ತ್ರಜ್ಞ, ಹುಟ್ಟಿದ್ದು ಆಸ್ಟ್ರಿಯದ ಬಿಯೆಲಿಟ್ಜ್ ಗ್ರಾಮದಲ್ಲಿ. ಇವನಿನ್ನೂ ಬಾಲಕನಾಗಿದ್ದಾಗ ಕುಟುಂಬದವರು ಷಿಕಾಗೋ ನಗರಕ್ಕೆ ಹೋಗಿ ನೆಲಸಿದರು. ಷಿಕಾಗೋವಿನ ಓಲ್ಡ್ ಯೂನಿರ್ಸಿಟಿಯಲ್ಲಿ ಇವನ ವ್ಯಾಸಂಗ ಆರಂಭಿಸಿ ದಕ್ಷಿಣ ಕ್ಯಾರೋಲಿನದ ಗ್ರೀನ್‍ವಿಲ್ಲಿಯಲ್ಲಿ ಮುಗಿಸಿ 1877ರಲ್ಲಿ ಸ್ನಾತಕೋತ್ತರ ಪದವಿ ಪಡೆದ, ಅಧ್ಯಾಪಕವರ್ಗದಲ್ಲಿ ಒಬ್ಬರಾಗಿದ್ದ ಎಚ್.ಟಾಯ್ ಈತನ ಮೇಲೆ ಅಧಿಕ ಪ್ರಭಾವ ಬೀರಿದ ವ್ಯಕ್ತಿ. ಅನಂತರ ಡಬ್ಲ್ಯು.ಡಿ. ವ್ಹಿಟ್ನೆಯವರ ನೇತೃತ್ವದಲ್ಲಿ ಇವನ ಸಾಹಿತ್ಯ ಚಟುವಟಿಕೆ ಆರಂಭವಾಯಿತು. ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಸಂಸ್ಕøತ ಶಿಕ್ಷಕರಾಗಿದ್ದ ಚಾಲ್ರ್ಸ್ ಲಾನ್‍ಮನ್‍ರ ಮಾರ್ಗದರ್ಶನದಲ್ಲಿ ತತ್ತ್ವಶಾಸ್ತ್ರದ ಡಾಕ್ಟೊರೇಟ್ ಪದವಿ ಪಡೆದ.

	ಒಂದು ವರ್ಷ ಬರ್ಲಿನ್ನನಲ್ಲಿ ಸಂಸ್ಕøತವನ್ನು ಅಭ್ಯಸಿಸಿದ, ಮರುವರ್ಷ ಲೀಪ್‍ಜಿóಗ್‍ನಲ್ಲಿ ಇಂಡಿಕ್ ಮತ್ತು ಕೆಲ್‍ಟಿಕ್ ಧ್ವನಿಶಾಸ್ತ್ರವನ್ನೂ ತುಲನಾತ್ಮಕ ಭಾಷಾಶಾಸ್ತ್ರವನ್ನೂ ಅಧ್ಯಯನಕ್ಕಾಗಿ ಅಯ್ಕೆಮಾಡಿಕೊಂಡು ಅಳವಾದ ಜ್ಞಾನ ಸಂಪಾದಿಸಿದ.

	1818ರಲ್ಲಿ ಇವನು ಹಾಫ್‍ಕಿನ್ಸ್ ವಿಶ್ವವಿದ್ಯಾಲಯದ ಸಂಸ್ಕøತ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಂಡ. ಇವನ ಮೇಧಾಶಕ್ತಿ ಸಂಸ್ಕøತ ಸಾಹಿತ್ಯಕ್ಕಷ್ಟೆ ಸೀಮಿತವಾಗದೆ ಯೂರೊಪಿಯನ್ ವ್ಯಾಕರಣ. ಭಾಷಾಶಾಸ್ತ್ರಗಳಿಗೂ ಹರಿದು ಇವನ ಖ್ಯಾತಿ ದೇಶವಿದೇಶಗಳಿಗೂ ಹರಡಿತು.

	ಕಾಶ್ಮೀರೀ ಅಥರ್ವವೇದದ ಕ್ರೋಮೋಫೋಟೊಗ್ರಾಫಿಕ್ ಪುನರ್ಮದ್ರಣ ಕಾರ್ಯದಲ್ಲಿ ರಿಚರ್ಡ್ ಗಾರ್ಬೆಯವರೊಂದಿಗೆ ಸಹಕರಿಸಲು 1899ರಲ್ಲಿ ಬ್ಯೂಮ್‍ಫೀಲ್ಡ್ ಯೂರೋಪಿಗೆ ತೆರಳಿದ ಹಾಫ್‍ಕಿನ್ಸ್ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಹ್ಯಾಂಬರ್ಗ್ (1902) ಆಲ್ಜೀಯರ್ಸ್ (1905), ಕೂಪನ್‍ಹೇಗನ್‍ಗಳಲ್ಲಿ ನಡೆದ ಪ್ರಪಂಚ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಅಮೆರಿಕನ್ ಓರಿಯಂಟಲ್ ಸೊಸೈಟಿಯ ಸದಸ್ಯನಾಗಿದ್ದ ಈತ ಉಪಾಧ್ಯಕ್ಷ ಹಾಗೂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ, ಇಷ್ಟೇ ಅಲ್ಲದೆ ಅಮೆರಿಕನ್ ಫಿಲಸಾಫಿಕಲ್ ಸೊಸೈಟಿ ಹಾಗೂ ಜರ್ಮನ್ ಓರಿಯಂಟಲ್ ಸೊಸೈಟಿ, ಅಮೆರಿಕನ್ ಫಿಲಸಾಫಿಕಲ್ ಅಸೋಸಿಯೇಷನ್, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಇವುಗಳಲ್ಲಿ ಸದಸ್ಯನಾಗಿ ಸಲಹೆಗಾರನಾಗಿ ಕೆಲಸ ಮಾಡಿದ.

	ಈತನ ಬಹುಮುಖ ಪ್ರತಿಭೆಗೆ ಪುರಸ್ಕಾರರೂಪವಾಗಿ ಕೂಪನ್‍ಹೇಗನ್ನಿನ ಪ್ರಪಂಚ ಸಾಹಿತ್ಯ ಸಮ್ಮೇಳನದಲ್ಲಿ ಈತನ ವೇದಿಕ್ ಕನ್‍ಕಾರ್ಡನ್ಸ್ ಗ್ರಂಥಕ್ಕೆ ಬವೇರಿಯದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಹಾಫ್‍ಕಿನ್ಸ್ ವಿಶ್ವವಿದ್ಯಾಲಯ ಎಲ್.ಎಲ್.ಡಿ. ಗೌರವ ಪದವಿ ನೀಡಿತು ಷಿಕಾಗೊ ವಿಶ್ವವಿದ್ಯಾಲಯ ತನ್ನ 25ನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಲ್‍ಎಲ್.ಡಿ. ಪದವಿಯನ್ನಿತ್ತು ಗೌರವಿಸಿತು.

	ಹಾರ್ವರ್ಡ್ ಓರಿಯಂಟಲ್ ಸೀರಿಸ್‍ನಲ್ಲಿ ಪ್ರಕಟವಾದ ಈತನ ವೇದಿಕ್ ಕನ್‍ಕಾರ್ಡ್‍ನ್ಸ್ (1906) ವೈದಿಕಸಾಹಿತ್ಯಕ್ಕೆ ನೀಡಿದ ಒಂದು ಅಪೂರ್ವ ಕಾಣಿಕೆ.	  								    (ಎಚ್,ಪಿ,ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ